good-samaritan-kannada-blog-pic
ಮುಖ್ಯಾಂಶಗಳು
• ಅಪಘಾತ ನಡೆದ ಸ್ಥಳದಲ್ಲಿ ಅಪಘಾಕ್ಕೀಡಾದವರನ್ನು ಆಸ್ಪತ್ರೆಗೆ ಸೇರಿಸಲು ನಿಮ್ಮ ಬಳಿ ಹಣವಿಲ್ಲವೇ..?
• ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸೇರಿಸಿದರೆ ಮತ್ತೆ ಮತ್ತೆ ಪೊಲೀಸ್ ಸ್ಟೇಷನ್ ಮತ್ತು ಕೋರ್ಟ್ ಮೆಟ್ಟಿಲೇರಬೇಕೆಂಬ ಭಯವೇ..?
• ಹಾಗಾದರೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..
ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಹೊಸ ಮಸೂದೆ ಜಾರಿಗೆ ಕರ್ನಾಟಕ ರಾಜ್ಯ ಸರ್ಕಾರ ನಿರ್ಧರಿಸಿದೆ ಹಾಗಾಗಿ ಅಪಘಾತವಾದಾಗ ನೆರವಿಗೆ ಧಾವಿಸಲು ಇನ್ಮುಂದೆ ಭಯಪಡಬೇಕಾಗಿಲ್ಲ, ನೀವು ತೋರುವ ಮಾನವೀಯತೆಯಿಂದ ಮುಂದೆ ಕೊರಗುವ ಪರಿಸ್ಥಿತಿ ನಿರ್ಮಾಣವಾಗದಂತೆ ಬೇಕಾದ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ, ಅದಕ್ಕಾಗಿ ಕರ್ನಾಟಕ ಸಜ್ಜನ, ವೈದಕೀಯ ಪರಿಣಿತರ ಮಸೂದೆ ಜಾರಿಗೆ ತರಲು ನಿರ್ಧರಿಸಿದೆ.
ಹಿಂದೆ ಅಪಘಾತ ನಡೆದ ಸ್ಥಳದಲ್ಲಿ ನೂರಾರು ಜನರಿದ್ದರೂ ಅಪಘಾತಕ್ಕೀಡಾದ ಸಂತ್ರಸ್ತರನ್ನು ಆಸ್ಪತ್ರೆಗೆ ಸೇರಿಸಲು ಯಾರೂ ಮುಂದೆ ಬರುತ್ತಿರಲಿಲ್ಲ, ಈ ಕಾರಣದಿಂದ ಹಲವು ಉಳಿಯಬಹುದಾದ ಜೀವಗಳು ಬಲಿಯಾದವು. ಇದನ್ನು ಮನಗಂಡ ಸರ್ಕಾರ ನೆರವಿಗೆ ಧಾವಿಸುವವರ ಅನುಕೂಲಕ್ಕಾಗಿ ಹಳೆ ಕಾನೂನುಗಳಲ್ಲಿ ಮಾರ್ಪಾಡನ್ನು ತರಲು ಹಾಗೂ ಸರ್ಕಾರದಿಂದ ಸಾಧ್ಯವಾದಷ್ಟು ಆರ್ಥಿಕ ಸಹಕಾರವನ್ನು ನೀಡಲು ಮುಂದಾಗಿದೆ. ಈ ಮೂಲಕ ನಿಮ್ಮ ಬಳಿ ಅಪಘಾತ ನಡೆದ ಸ್ಥಳದಲ್ಲಿ ಅಪಘಾಕ್ಕೀಡಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲು ಹಣವಿಲ್ಲದಿದ್ದರೂ ಪರವಾಗಿಲ್ಲ ನೀವು ಇನ್ನು ಮುಂದೆ ಹಣದ ಬಗ್ಗೆ ಚಿಂತಿಸುವುದು ಬೇಡ, ಮೊದಲು ನೀವು ಆತನನ್ನು ಆಸ್ಪತ್ರೆಗೆ ಸೇರಿಸಿ ಆತನ ಆರೈಕೆಗೆ ತಗುಲುವ ಕರ್ಚು ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಹಾಗಾಗಿ ಅಪಘಾತಕ್ಕೀಡಾದ ಸಂತ್ರಸ್ತರನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವ ಕಡೆಗೆ ಗಮನ ಹರಿಸಿ ಅವರ ಪ್ರಾಣವನ್ನು ಉಳಿಸುವ ಮಾನವೀಯತೆಯ ತೋರಿ.
ಅಪಘಾತವನ್ನು ಕಣ್ಣಾರೆ ಕಂಡರೂ ಕೂಡ ಎಷ್ಟೋ ಸಲ ಜನರು ಆ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಮುಂದೆ ಸಾಗುತ್ತಾರೆ, ಹೀಗೆ ಸಾಗುವುದಕ್ಕೂ ಒಂದು ಬಲವಾದ ಕಾರಣವಿದೆ ಅದೇನೆಂದರೆ ಅಪಘಾತಕ್ಕೀಡಾದವನನ್ನು ಆಸ್ಪತ್ರೆಗೆ ಸೇರಿಸಿದರೆ ಹಲವು ಬಾರಿ ಪೊಲೀಸ್ ಸ್ಟೇಷನ್ ಮತ್ತು ನ್ಯಾಯಾಲಯದ ಮೆಟ್ಟಿಲು ಹತ್ತಬೇಕೆಂಬ ಭಯವೂ ಕೂಡ ಹೌದು ಆದರೆ ಇನ್ನು ಮುಂದೆ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಕಾರಣವೆಂದರೆ ನೀವು ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸೇರಿಸಿದ ಕಾರಣಕ್ಕೆ ಪೊಲೀಸ್ ಹಾಗೂ ನ್ಯಾಯಾಲಯದ ವಿಚಾರಣೆಗೆ ಪದೇಪದೆ ಹಾಜರಾಗುವ ಅಗತ್ಯವೂ ಇಲ್ಲ ಅದರಿಂದಲೂ ಕೂಡ ವಿನಾಯಿತಿ ನೀಡಲು ಬುಧವಾರ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿರ್ಧರಿಸಿದೆ.
ಇದರ ಜೊತೆಯಲ್ಲಿಯೇ ಅಪಘಾತವಾದ ಸ್ಥಳದಲ್ಲಿ ಮಾನವೀಯತೆ ಮರೆತು ದೃಶ್ಯಾವಳಿಯನ್ನು ಚಿತ್ರೀಕರಿಸುವ ಪರಿಪಾಠಕ್ಕೂ ಹೊಸ ಮಸೂದೆ ಮೂಲಕ ಕಡಿವಾಣ ಹಾಕಲು ಸರ್ಕಾರ ನಿರ್ಧರಿಸಿದೆ, ಅವಘಾತವಾದಾಗ ಒಂದು ಕಡೆ ಅಪಘಾತಕ್ಕೀಡಾದ ವ್ಯಕ್ತಿ ಬಿದ್ದು ನರಳುತ್ತಿದ್ದರೆ ಆತನನ್ನು ಆಸ್ಪತ್ರೆಗೆ ಸೇರಿಸುವ ಕನಿಷ್ಟ ಮಾನವೀಯತೆಯನ್ನು ಮರೆತು ಮೊಬೈಲ್‍ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವಂತ ವಿಕೃತ ಮನಸ್ಥಿತಿಯನ್ನು ನಿಯಂತ್ರಿಸುವ ದೃಷ್ಠಿಯಿಂದ ಸರ್ಕಾರ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಿರ್ಧರಿಸಿದೆ.
ಒಟ್ಟಿನಲ್ಲಿ ಅಪಘಾತ ನಡೆದ ಸ್ಥಳದಲ್ಲಿ ಯಾರೇ ಇದ್ದರೂ ಅವರು ಮೊದಲು ಮಾಡಬೇಕಾದ ಕಾರ್ಯವೆಂದರೆ ಅಪಘಾತಕ್ಕೀಡಾದ ವ್ಯಕ್ತಿಯ ಪ್ರಾಣ ಉಳಿಸುವುದು. ಉಳಿದ ವಿಚಾರಗಳಿಂದ ನಿಮಗೆ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ಸರ್ಕಾರ ಎಲ್ಲಾ ರೀತಿಯಲ್ಲಿ ಅನುಕೂಲಗಳನ್ನು ಮಾಡಿಕೊಡಲು ಬದ್ಧವಾಗಿದೆ. ಮುಂದೆ ರಸ್ತೆಗಳಲ್ಲಿ ಅಪಘಾತÀಕ್ಕೀಡಾಗಿ ಯಾರ ಸಹಾಯವೂ ಸಿಗದೆ ಒಂದಷ್ಟು ಜೀವಗಳು ಬಲಿಯಾಗದಂತೆ ತಡೆಯುವುದೇ ಸರ್ಕಾರದ ಮುಖ್ಯ ಉದ್ದೇಶ. ಪ್ರತೀ ಜೀವವೂ ಅಮೂಲ್ಯ, ಅದನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಒಂದಾಗೋಣ..
Advertisements