anil-uday-blog-pic-01

ಘಟನೆಯ ವಿವರ

• ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ನಡೆದ ಘೋರ ದುರಂತ.
ತಿಪ್ಪಗೊಂಡನಹಲ್ಲಿ ಜಲಾಶಯದ ಬಳಿ ಈ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುವಾಗ ಹೆಲಿಕಾಪ್ಟರ್‍ನಿಂದ ಜಲಾಶಯದ ನೀರಿಗೆ ಸುಮಾರು 100 ಅಡಿಗಳಷ್ಟು ಎತ್ತರದಿಂದ ಜಿಗಿದಿದ್ದಾರೆ, ಈಜಲು ಬಾರದಿದ್ದರ ಪರಿಣಾಮದಿಂದಾಗಿ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.
• ಲೈಫ್ ಜಾಕೇಟ್ ಧರಿಸದೆ ನೀರಿಗೆ ಹಾರಿದ ಅನಿಲ್ ಮತ್ತು ಉದಯ್.
ಸಿಕ್ಸ್ ಪ್ಯಾಕ್ ಕಾಣಿಸಲಿ ಎಂಬ ಉದ್ದೇಶದಿಂದ ಲೈಫ್ ಜಾಕೇಟ್ ಧರಿಸದೆ ಈ ಇಬ್ಬರು ನಟರು ನೀರಿಗೆ ಹಾರಿದ್ದಾರೆ, ಇವರು ಹಾರಿದ ನಂತರ ದುನಿಯ ವಿಜಿಯವರು ಕೂಡ ನೀರಿಗೆ ಹಾರಿದ್ದಾರೆ ಆದರೆ ಅವರು ಲೈಫ್ ಜಾಕೇಟ್ ಧರಿಸಿದ್ದರಿಂದ ಪ್ರಣಾಪಾಯದಿಂದ ಪಾರಾಗಿದ್ದಾರೆ.
• ಅವರನ್ನು ರಕ್ಷಿಸಲು ಸಾಧ್ಯವಾಗದ ರೀತಿಯಲ್ಲಿ ಕೆಟ್ಟು ನಿಂತಿದ್ದ ಬೋಟುಗಳು.
ಅವರಿಗೆ ಈಜು ಬರುವುದಿಲ್ಲ ಎಂದು ತಿಳಿದಿದ್ದರೂ ಕೂಡ ನೀರಿಗೆ ಹಾರಿದ ಮೇಲೆ ಅವರನ್ನು ರಕ್ಷಿಸಲು ಸೂಕ್ತ ರೀತಿಯ ಬೋಟ್ ವ್ಯವಸ್ಥೆ ಕೂಡ ಇಲ್ಲದಿರುವುದು ಅವರ ಸಾವಿಗೆ ಇನ್ನೊಂದು ಕಾರಣವೂ ಹೌದು.
ಈ ಸಾವಿಗೆ ಹೊಣೆ ಯಾರು…???
ಆ ಇಬ್ಬರು ನಟರು ತಮಗೆ ಈಜು ಬರುವುದಿಲ್ಲವೆಂದು ಸಾಹಸ ನಿರ್ದೇಶಕರಾದ ರವಿವರ್ಮಾರಿಗೆ ಮೊದಲೇ ತಿಳಿಸಿದ್ದರು     ಅದೂ ಅಲ್ಲದೆ ಅನಿಲ್ ಮತ್ತು ಉದಯ್‍ರಿಗೆ ಕನಿಷ್ಟ ಲೈಫ್ ಜಾಕೇಟ್ ಧರಿಸಲು ಅವಕಾಶ ನೀಡಬೇಕಾಗಿತ್ತು ಆದರೆ ಅವರ ಸಿಕ್ಸ್ ಪ್ಯಾಕ್ ಕಾಣಿಸಲಿ ಎಂಬ ಉದ್ದೇಶದಿಂದ ಅದನ್ನೂ ಕೂಡ ನೀಡಿರಲಿಲ್ಲ. ನೀರಿಗೆ ಹಾರಿದ ನಂತರ ತಕ್ಷಣ ಹೋಗಿ ಅವರನ್ನು ಕಾಪಾಡಲು ಬೇಕಾದಂತಹ ಸ್ಪೀಡ್ ಬೋಟ್ ಕೂಡ ಅವರ ಬಳಿ ಇರಲಿಲ್ಲ, ಇಷ್ಟೆಲ್ಲಾ ಲೋಪದೋಷಗಳಿದ್ದು ಅದ್ಯಾವ ಧೈರ್ಯದ ಮೇಲೆ ಈಜು ಬಾರದವರನ್ನು ನೀರಿಗೆ ಹಾರುವಂತ ದೃಶ್ಯದಲ್ಲಿ ಬಳಸಿಕೊಂಡರೆಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಬದುಕಿಬಾಳಬೇಕಾದ ಅಮಾಯಕ ಜೀವಗಳು ಯಾರದೋ ಬೇಜವಾಬ್ದಾರಿಗೆ ಬಲಿಯಾಗಿವೆ.
ಇಂತಹಾ ಘಟನೆಗಳು ಮತ್ತೆ ಮರುಕಳಿಸದಂತೆ ಸೂಕ್ತ ಎಚ್ಚರಿಕೆ ಕ್ರಮ ಅನುಸರಿಸುವುದು ಉತ್ತಮ, ಈ ದುರಂತದಲ್ಲಿ ಮಡಿದವರ ಆತ್ಮಕ್ಕೆ ದೇವರು ಮುಕ್ತಿಯನ್ನು ಕರುಣಿಸಲಿ ಹಾಗೆಯೇ ಅವರ ಕುಟುಂಬಕ್ಕೆ ಈ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ.
Advertisements