ಸಾವಿನ ಮನೆಯ ಬಾಗಿಲು ತೆರೆದ ಸೆಲ್ಪೀ ತಾಣಗಳು

Alekan Falls

ಜುಲೈ 19, 2016ರಂದು ಚಾರ್ಮುಡಿ ಘಾಟ್‍ನ ಅಲೆಕನ್ ಫಾಲ್ಸ್‍ನಲ್ಲಿ ಸೆಲ್ಫೀ ತೆಗೆದುಕೊಳ್ಳಲು ಕಸರತ್ತು ನಡೆಸಿದ ಇಬ್ಬರು ಯುವಕರು ಪ್ರಾಣತೆತ್ತರು.

 

Ganga (1)

ಜೂನ್ 22, 2016ರಂದು 7 ಜನ ಯುವಕರು ಸೆಲ್ಫೀ ತೆಗೆಯಲು ಹೋಗಿ ಗಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇದು ನಡೆದದ್ದು ಕಾನ್ಪುರದಲ್ಲಿ.

Gokarna (3)

ಗೋಕರ್ಣದ ಸಮುದ್ರದಲ್ಲಿ ಜೀವ ಕಳೆದುಕೊಂಡವಳು 21 ವರ್ಷದ ಕಾನೂನು ವಿದ್ಯಾರ್ಥಿನಿ. ಮೇ 29, 2016ರಂದು ಸೆಲ್ಫೀ ತೆಗೆಯುವ ಖುಷಿಯಲ್ಲಿ ಪ್ರಣೀತಾ ಮೆಹ್ತಾ ತನ್ನ ಜೀವಕ್ಕೆ ಕುತ್ತು ತಂದುಕೊಂಡಳು.

 

Hulivanahalli - Canal 2

ಫೆಬ್ರವರಿ 12, 2016ರಂದು ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಸೆಲ್ಫೀ ತೆಗೆದುಕೊಳ್ಳುವ ಭರದಲ್ಲಿ ಜೀವ ಕಳೆದುಕೊಂಡರು. ಹುಲಿವನ ಹಳ್ಳಿಯಲ್ಲಿ ಹರಿಯುವ ಕಾಲುವೆಗೆ ಬಿದ್ದು ಈ ಅವಘಡ ಸಂಭವಿಸಿತ್ತು.

 

Marine Drive (2)

ಮುಂಬೈನ ಮರೈನ್ ಡ್ರೈವ್‍ನಲ್ಲಿ ಹುಡುಗಿಯೊಬ್ಬಳು ಸೆಲ್ಫೀ ತೆಗೆಯಲು ಹೋಗಿ ಪ್ರಾಣಕ್ಕೆ ಸಂಚಕಾರ ತಂದುಕೊಂಡಳು. ಅಷ್ಟೇ ಅಲ್ಲದೇ ಅವಳನ್ನು ಕಾಪಾಡಲು ಹೋದ ವ್ಯಕ್ತಿ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟ

ಸೆಲ್ಫೀ ಕೂಡ ಇದೀಗ ಪ್ರಾಣಕ್ಕೆ ಕುತ್ತಾಗುತ್ತಿದ್ದು ಕರ್ನಾಟಕ ಸರ್ಕಾರ ಈ ಕುರಿತು ಗಂಭೀರವಾಗಿ ಚಿಂತನೆ ನಡೆಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ‘ಡೇಂಜರ್ ಸೆಲ್ಫೀ ಜೋನ್’ ಗುರುತಿಸುವಿಕೆ, ಸಿಸಿಟಿವಿ ಅಳವಡಿಸುವಿಕೆ ಮೊದಲಾದ ಕಾರ್ಯಗಳು ನಡೆಯುತ್ತಿವೆ. ಸೆಲ್ಫೀಯಿಂದ ಆಗುವ ಅಪಾಯಗಳನ್ನು ತಪ್ಪಿಸಲು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ನಿಮ್ಮ ಅನಿಸಿಕೆಯನ್ನು ಕಮೆಂಟ್ ಸೆಕ್ಷನ್‍ನಲ್ಲಿ ತಿಳಿಸಿ.

Advertisements