Search

Namma Karnataka

Month

July 2016

ಕರ್ನಾಟಕವಿದು ಹಸಿರಿನ ತೊಟ್ಟಿಲು

6988384214dd15e7620d2c

ಅನಾದಿಕಾಲದಿಂದಲೂ ಮನುಷ್ಯಸಂಕುಲ ಪ್ರಕೃತಿಯ ಜೊತೆ ಅವಿನಾಭಾವ ಸಂಬಂಧವನ್ನು ಉಳಿಸಿಕೊಂಡು ಬಂದಿದೆ. ಮಾನವನ ಬೆಳವಣಿಯ ಪ್ರತಿಯೊಂದು ಹಂತವೂ ಸಹ ಪ್ರಕೃತಿಮಾತೆಯ ಮಡಿಲಿನಿಂದಲೇ ಆರಂಭವಾಗಿದೆ. ಆದರೆ ಒಂದು ಹಂತವನ್ನು ತಲುಪಿದ ನಂತರ ಆಡಿ ಬೆಳೆದ ಮಡಿಲಿಗೇ ಕಿಚ್ಚು ಹಚ್ಚುವ ಕೆಲಸ ಮಾಡಿದ ಮಾನವರು, ಅದಕ್ಕೆ ತಕ್ಕ ಪ್ರತಿಫಲವನ್ನೂ ಉಣ್ಣುತ್ತಿದ್ದಾರೆ. ಹಸಿರಿಲ್ಲದೇ ಉಸಿರಿಲ್ಲ ಎನ್ನುವ ಮಾತು 100 ಪ್ರತಿಶತ ಸತ್ಯವಾದುದು ಹಾಗೂ ಅದು ನಿರೂಪಿತ ಕೂಡ. ಅದನ್ನು ಉಳಿಸಿ – ಬೆಳೆಸುವ ಆದ್ಯ ಕರ್ತವ್ಯ ನಮ್ಮದಾಗಿದೆ.

   ‘ವನಮಹೋತ್ಸವ’ ಆಚರಿಸುವ ಮೂಲಕ ಹಸಿರಿನೆಡೆಗಿನ ತುಡಿತವನ್ನು ಜಗತ್ತು ತೋರುತ್ತಾ ಬಂದಿದೆ. ಕನ್ನಡನೆಲ ಇಂದಿಗೂ ಹಸಿರನ್ನು ಹಾಸುಹೊದ್ದಿದೆ. ಅದನ್ನು ಕಾಪಾಡುವುದರ ಜೊತೆಗೆ ಬೆಳೆಸುವ ಕೆಲಸವೂ ನಿರಂತರವಾಗಿ ನಡೆಯುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆ ನಿಟ್ಟಿನಲ್ಲಿ ಗಮನಾರ್ಹ ಕೆಲಸ ಮಾಡುತ್ತಿದೆ. ಪ್ರಕೃತಿಗೆ ಸಂಬಂಧಿಸಿದಂತೆ ಕರ್ನಾಟಕ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ರಾಷ್ಟ್ರದಲ್ಲೇ ಅತಿ ಹೆಚ್ಚು ಅಂದರೆ ಶೇ.25ರಷ್ಟು ಆನೆ ಮತ್ತು ಶೇ.18ರಷ್ಟು ಹುಲಿಗಳನ್ನು ಹೊಂದಿದ ನೆಲ ನಮ್ಮದು. 2013-15ರ ರಾಷ್ಟ್ರೀಯ ಸಮೀಕ್ಷೆಯಲ್ಲಿ ರಾಜ್ಯದಲ್ಲಿ 28,900 ಹೆಕ್ಟೇರ್‍ನಷ್ಟು ಅರಣ್ಯ ಪ್ರದೇಶ ಹೆಚ್ಚಳವಾಗಿದೆ. ಇಂತಹ ಮಹತ್ವದ ವಿಷಯದೆಡೆಗೆ ಆಸಕ್ತಿ ತೋರಿ, ಪರಿಣಾಮಕಾರಿ ಕೆಲಸ ಮಾಡುತ್ತಿರುವ ನಮ್ಮ ಸರ್ಕಾರ ನಿಜಕ್ಕೂ ಅಭಿನಂದನಾರ್ಹ.

   ಹಸಿರಿನ ಹಾಸನ್ನು ಹೊದಿಸುವ ಕಾರ್ಯಕ್ಕಾಗಿ ಸಿದ್ದರಾಮಯ್ಯನವರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ಪ್ರಶಂಸನೀಯವಾಗಿವೆ. ರಾಜ್ಯದಲ್ಲಿ ಶೇ.33ರಷ್ಟು ಹಸಿರು ಕವಚ ಹೊಂದಲು ರೈತರ ಸಹಭಾಗಿತ್ವದಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಖಾಸಗಿ ಜಮೀನುಗಳ ಅರಣ್ಯೀಕರಣಕ್ಕಾಗಿ ‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ’ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ರೂ.16.46 ಕೋಟಿ ಪ್ರೋತ್ಸಾಹಧನ ನೀಡಲಾಗಿದ್ದು, ಇದುವರೆಗೆ ರೈತರಿಂದ 226.43 ಲಕ್ಷ ಗಿಡಗಳನ್ನು ನೆಡಲಾಗಿದೆ! ‘ಹಸಿರು ಗ್ರಾಮ’ ಯೋಜನೆಯಡಿ ಪ್ರತಿ ತಾಲೂಕಿನ ಒಂದು ಗ್ರಾಮವನ್ನು ಆಯ್ದುಕೊಂಡು ಅರಣ್ಯ ಪ್ರದೇಶ ಅಭಿವೃದ್ಧಿಗೆ 3 ಕೋಟಿ ರೂ.ವೆಚ್ಚದಲ್ಲಿ ಕೆಲಸ-ಕಾರ್ಯ ನಡೆಯುತ್ತಿದೆ.

   ಇನ್ನು ಪ್ರಕೃತಿಯ ಆಸರೆಯಲ್ಲಿ ಬದುಕು ಕಂಡುಕೊಳ್ಳುವ ವನ್ಯ ಪ್ರಾಣಿಗಳು ಹಾಗೂ ಜೀವವೈವಿಧ್ಯ ಸಂರಕ್ಷಣೆಗಾಗಿ ಬಾಗಲಕೋಟೆ ಜಿಲ್ಲೆಯ ಎಡಹಳ್ಳಿ ಚಚಿಂಕರ ವನ್ಯಧಾಮ, ತುಮಕೂರು ಜಿಲ್ಲೆಯ ತಿಮ್ಮಲಾಪುರ ವನ್ಯಧಾಮ ಮತ್ತು ಚಿತ್ರದುರ್ಗ ಜಿಲ್ಲೆಯ ಜೋಗಿಮಟ್ಟಿ ವನ್ಯಧಾಮಗಳನ್ನಾಗಿ ಘೋಷಣೆ ಮಾಡಲಾಗಿದೆ. ಶ್ರೀಗಂಧದ ಬೀಡಿನಲ್ಲಿನ ಶ್ರೀಗಂಧದ ಸಂರಕ್ಷಣೆಗಾಗಿ ‘ಸಿರಿ ಚಂದನಚನ’ ಯೋಜನೆ ಮೂಲಕ 548 ಹೆಕ್ಟೇರ್‍ನಲ್ಲಿ ನೆಡುತೋಪು ನಿರ್ಮಾಣ ಮಾಡಲಾಗಿದ್ದು, ಸ್ವಾಭಾವಿಕ ಶ್ರೀಗಂಧ ಗಿಡಗಳಿಗೆ ರಕ್ಷಣೆ ನೀಡಲಾಗುತ್ತಿದೆ.

   ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ರಾಜ್ಯ ಸರ್ಕಾರ ಹಸಿರಿನ ಉಳಿವಿಗಾಗಿ – ಬೆಳವಣಿಗೆಗಾಗಿ ಕಾರ್ಯನಿರತವಾಗಿದೆ. ಇದರ ಜೊತೆಗೆ ಪ್ರತಿಯೊಬ್ಬ ನಾಗರಿಕರೂ ಗಿಡ ನೆಡುವ ಮೂಲಕ ತಮ್ಮ ಕೊಡುಗೆ ನೀಡಬೇಕಾಗಿದೆ. ಸರ್ಕಾರದ ಜೊತೆ ಕೈಜೋಡಿಸಿ ನಮ್ಮ ಪ್ರಕೃತಿಯನ್ನು ಉಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ. ಇದು ಕೇವಲ ನಮಗಾಗಿ ಅಲ್ಲ ಭವ್ಯ ಭವಿಷ್ಯವನ್ನು ನಿರ್ಮಿಸುವುದಕ್ಕಾಗಿ.

Advertisements

ಭಾವನಾತ್ಮಕವಾಗಿ ಹೆದರಿಸುವ ‘ನಾನಿ’!

maxresdefault

ಟ್ರೇಲರ್ ಮೂಲಕವೇ ನಿರೀಕ್ಷೆ ಹುಟ್ಟುಹಾಕಿದ್ದ ಚಿತ್ರ ನಾನಿ. ಹಾರರ್ ಚಿತ್ರಗಳ ಸಾಲುಸಾಲು ಬಿಡುಗಡೆಯ ನಡುವೆಯೂ ಭರವಸೆ ಮೂಡಿಸಿದ್ದ ಚಿತ್ರದ ಟ್ರೇಲರ್ ನೋಡಿ ಚಿತ್ರಮಂದಿರಕ್ಕೆ ತೆರಳಿದವರಿಗೆ ನಿರಾಸೆಯಂತೂ ಆಗದು. ಸಂಪೂರ್ಣ ಭೂತಮಯಂ ಎಂಬಂತೆ ಚಿತ್ರವಿಲ್ಲದೇ ಇರುವುದು, ಭಾವನಾತ್ಮಕ ಅಂಶಗಳಿಗೆ ಒತ್ತು ನೀಡಿರುವುದು ‘ನಾನಿ’ಯನ್ನು ಒಂದು ಕೌಟುಂಬಿಕ ಚಿತ್ರವನ್ನಾಗಿಸಿದೆ.

   ಸಮರ್ಥ್ (ಮನೀಷ್) ಹಾಗೂ ಪತ್ನಿ ಮಂತ್ರ (ಪ್ರಿಯಾಂಕಾ) ಹೊಸದಾಗಿ ಮನೆಯೊಂದನ್ನು ಕೊಂಡುಕೊಳ್ಳುತ್ತಾರೆ. ಆ ಮನೆಯ ಬಗ್ಗೆ ಭಾವನಾತ್ಮಕ ನಂಟು ಹೊಂದಿರುವ ಸಮರ್ಥ್‍ಗೆ ಆ ಮನೆಯ ಭಯಾನಕ ಮುಖದ ಪರಿಚಯ ಇರುವುದಿಲ್ಲ. ತನ್ನ ಹಿರಿಯರು ಬಾಳಿ ಬದುಕಿದ ಮನೆ ಎನ್ನುವ ಭಾವನಾತ್ಮಕ ನಂಟಿನೊಂದಿಗೆ ಸಮರ್ಥ್ ತನ್ನ ಪತ್ನಿಯೊಂದಿಗೆ ಮನೆ ಪ್ರವೇಶಿಸುತ್ತಾನೆ. ಆಮೇಲೆ ಅಲ್ಲಿ ನಡೆಯುವ ಭಯಾನಕ ವಿಷಂiÀiಗಳು ದಂಪತಿಗಳನ್ನು ಹೈರಾಣಾಗಿಸುತ್ತದೆ. ಅಲ್ಲಿಗೆ ಮಂತ್ರವಾದಿಯ ಪ್ರವೇಶವಾಗುತ್ತದೆ ಹಾಗೂ ಮಂತ್ರವಾದಿಯ ಭೀಕರತೆಗೆ ಹೆದರಿ ಮನೆಯ ಕಾವಲುಗಾರ ಈ ಎಲ್ಲ ಭಯಾನಕತೆಯ ಹಿಂದಿನ ಸತ್ಯವನ್ನು ಬಿಚ್ಚಿಡುತ್ತಾನೆ.

   ಇಲ್ಲಿಂದ ಕಥೆ ಮತ್ತೊಂದು ಮಗ್ಗುಲಿಗೆ ಹೊರಳುತ್ತದೆ. ಅಲ್ಲಿ ಜೈಜಗದೀಶ್ ಹಾಗೂ ಸುಹಾಸಿನಿ ಜೋಡಿಯ ಅದ್ಭುತ ನಟನೆ ಪ್ರೇಕ್ಷಕನಿಗೆದುರಾಗುತ್ತದೆ. ಮಕ್ಕಳಿಲ್ಲದ ದಂಪತಿ, ಮಕ್ಕಳನ್ನು ಪಡೆಯಲು ಮಾಡುವ ಉಪಾಯ, ಪ್ರಣಾಳ ಶಿಶುವನ್ನು ಪಡೆದಾದ ಮೇಲೆ ತಂದೆಗೆ ಈ ಮಗು ತನ್ನದಲ್ಲ ಎನ್ನುವ ಭಾವನೆ ಮೂಡಿ ಮಗುವನ್ನು ನಿರ್ಲಕ್ಷಿಸುವುದು ಹೀಗೆ ಕಥೆ ಸಾಗುತ್ತದೆ. ತಂದೆಯ ಪ್ರೀತಿಯಿಂದ ವಂಚಿತವಾದ ಮಗುವಾಗಿ ಅಭಿನಯ ನೀಡಿರುವ ಬೇಬಿ ಸುಹಾಸಿನಿ ತನ್ನ ಮುಗ್ಧತೆಯಿಂದಲೇ ಪ್ರೇಕ್ಷಕರಿಗೆ ಇಷ್ಟವಾಗುತ್ತಾಳೆ. ಮುಂದೆ ಆಕೆಯೇ ಭೂತವಾಗುತ್ತಾಳೆ!

   ಇನ್ನು ಅಭಿನಯಕ್ಕೆ ಬಂದರೆ ಮನೀಷ್ ಕಂಠಪಾಠ ಒಪ್ಪಿಸುವ ವಿಧೇಯ ವಿದ್ಯಾರ್ಥಿಯಂತೆ ಭಾಸವಾಗುತ್ತಾರೆ. ಪ್ರಿಯಾಂಕಾ ನಟನೆಯಲ್ಲಿ ಭರವಸೆ ಮೂಡಿಸುತ್ತಾಳೆ. ನಿರ್ದೇಶಕ ಸುಮಂತ್ ಗೊಲ್ಲಹಳ್ಳಿ ಒಂದರ್ಥದಲ್ಲಿ ಗೆದ್ದಿದ್ದಾರೆ ಎಂದೇ ಹೇಳಬಹುದು. ಇರುವ ನಾಲ್ಕು ಹಾಡುಗಳು ಆ ಕ್ಷಣಕ್ಕೆ ಚೆನ್ನಾಗಿವೆ. ಹಿನ್ನೆಲೆ ಸಂಗೀತ ಚೆನ್ನಾಗಿದ್ದರೂ, ಕೆಲವೆಡೆ ದೆವ್ವವೂ ಕಿವಿಮುಚ್ಚಿ ಓಡಿಹೋಗುವಂತಿದೆ. ಗುಂಡ್ಲುಪೇಟೆ ಸುರೇಶ ಛಾಯಾಗ್ರಹಣದಲ್ಲಿ ಚಿತ್ರವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಒಟ್ಟಿನಲ್ಲಿ ಪ್ರೇಕ್ಷಕರು ಒಮ್ಮೆ ನೋಡಬೇಕಾದ ಚಿತ್ರವಿದು. ಹೆದರಿಕೆಯ ಜೊತೆಗೆ ಕಣ್ಣೀರಿಗೂ ಜಾಗವಿದೆ. ಹಾಗೆ ಸುಮ್ಮನೆ ಒಮ್ಮೆ ಹೆದರಿ ಬನ್ನಿ.

Blog at WordPress.com.

Up ↑