sugarcane-kLPG--621x414@LiveMint

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಲವು ಹೊಚ್ಚಹೊಸ ಯೋಜನೆಗಳಿಗೆ ನಾಂದಿ ಹಾಡಿದೆ. ಜನಪರ, ಅಭಿವೃದ್ಧಿಪರ ಹಾಗೂ ಸಾಮಾಜಿಕ ನ್ಯಾಯದ ಬುನಾದಿಯ ಮೇಲೆ ಪ್ರಕಟಿಸಲ್ಪಟ್ಟ ಯೋಜನೆಗಳು ಸಮಾಜದ ಪ್ರತಿಯೊಬ್ಬ ವ್ಯಕ್ತಿಯನ್ನೂ ತಲುಪುವಂತೆ ಮಾಡಲಾಗಿದೆ. ಇದು ರಾಜ್ಯ ಸರ್ಕಾರದ ಜನಪರ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಈ ಮೂಲಕ ಕರ್ನಾಟಕ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ.

   ಕಾಂಗ್ರೆಸ್ ಸರ್ಕಾರವು ರೈತರ ಅಭ್ಯುದಯಕ್ಕೆ ಕಟಿಬದ್ಧವಾಗಿದೆ ಎಂಬುದು ಈಗಾಗಲೇ ತಿಳಿದ ವಿಷಯ. ಇತ್ತೀಚೆಗೆ ರಾಜ್ಯವು ಭೀಕರ ಬರಗಾಲಕ್ಕೆ ತುತ್ತಾದಾಗ ರೈತರಿಗೆ ಒಂದಿನಿತೂ ತೊಂದರೆಯಾಗದಂತೆ ನೋಡಿಕೊಂಡ ಸರ್ಕಾರವು ರಾಜ್ಯದ ಜನತೆಯಿಂದ ಅಪಾರ ಪ್ರಶಂಸೆಗೊಳಗಾಯಿತು. ಬರಗಾಲದ ಸಮಯದಲ್ಲಿ ಸಾಕಷ್ಟು ರೈತರು ಸಂಕಷ್ಟಕ್ಕೆ ಈಡಾದರು. ಬೆಳೆ ಹಾನಿಯಾಗಿ ಕಣ್ಣೀರಾದರು. ಆದರೆ ಸರ್ಕಾರ ಅವರಿಗೆ ಹೆಗಲಾಗಿ ನಿಂತಿತು. ಬೆಳೆ ನಷ್ಟಕ್ಕೆ ಪಪರಿಹಾರ ನೀಡಿತು. ರಾಜ್ಯದಲ್ಲಿ 8 ಲಕ್ಷಕ್ಕೂ ಹೆಚ್ಚು ರೈತರಿಗೆ ಬೆಳೆವಿಮೆ ಯೋಜನೆಯಡಿ ರೂ.693 ಕೋಟಿ ವಿಮೆ ಹಣ ವಿತರಿಸಲಾಯಿತು. ಈ ಬಾರಿ 15 ಲಕ್ಷ ರೈತರಿಗೆ ಬೆಳೆ ವಿಮೆ ಯೋಜನೆ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಇಷ್ಟು ಪ್ರಮಾಣದ ವಿಮೆ ಒದಗಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

   ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿರುವ ರಾಜ್ಯ ಸರ್ಕಾರ, ಬೆಳೆ ವಿಮಾ ಯೋಜನೆಯನ್ನು ಡಿಜಿಟಲೀಕರಣಗೊಳಿಸುವ ಮೂಲಕ ರೈತರಿಗೆ ವರ್ಷದ ಆರಂಭದಲ್ಲಿಯೇ ವಿಮಾ ಹಣ ನೀಡಲು ನಿರ್ಧರಿಸಿದೆ. ವಿಮಾ ಯೋಜನೆಯಲ್ಲಿ ಅಕ್ರಮ ಮತ್ತು ವಿಳಂಬವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಸಿಬ್ಬಂದಿಗಳಿಗೆ ಜಿಪಿಎಸ್ ಸೌಲಭ್ಯವಿರುವ ಟ್ಯಾಬ್ಲೆಟ್ ವಿತರಿಸಲೂ ತೀರ್ಮಾನಿಸಲಾಗಿದೆ. ಈ ಮೂಲಕ ರೈತರ ಕ್ಷೇಮಾಭಿವೃದ್ಧಿಗೆ ಸರ್ಕಾರ ಕಟಿಬದ್ಧವಾಗಿದೆ ಎಂದು ಇನ್ನೊಮ್ಮೆ ಸಾಬೀತಾದಂತಾಗಿದೆ.

   ಈ ವರ್ಷ ಮುಂಗಾರುಹಂಗಾಮಿನಲ್ಲಿ 21 ಲಕ್ಷ ಟನ್ ರಸಗೊಬ್ಬರದ ಅವಶ್ಯಕತೆಯಿದೆ. ಸರ್ಕಾರ ಹಾಗೂ ಮಾರುಕಟ್ಟೆಯಲ್ಲಿ 8.5 ಲಕ್ಷ ರಸಗೊಬ್ಬರ ಲಭ್ಯವಿದೆ. ಅಷ್ಟೇ ಅಲ್ಲದೆ, 2.5 ಲಕ್ಷ ಟನ್ ರಸಗೊಬ್ಬರ ಕಾಪು ದಾಸ್ತಾನಿನ ರೂಪದಲ್ಲಿ ಸಂಗ್ರಹವಿದೆ. ಇದರಿಂದಾಗಿ ರಸಗೊಬ್ಬರಕ್ಕೆ ಯಾವುದೇ ತೊಂದರೆ ಇಲ್ಲ. ಒಣ ಬೇಸಾಯ ನೆಚ್ಚಿಕೊಂಡ ರೈತರಿಗೆ ಈ ವರ್ಷ 1 ಲಕ್ಷ ಕೃಷಿ ಹೊಂಡಗಳನ್ನು ನಿರ್ಮಿಸಲಾಗುವುದು ಎಂದು ಕೃಷಿ ಸಚಿವ ಕೃಷ್ಣಭೈರೇಗೌಡರು ತಿಳಿಸಿದ್ದಾರೆ. ಈ ರೀತಿ ರಾಜ್ಯ ಸರ್ಕಾರ ರೈತರ ಪರವಾಗಿ ಹತ್ತು ಹಲವು ಯೋಜನೆಗಳನ್ನು ಕೈಗೊಳ್ಳುತ್ತಿದೆ. ಈ ಮೂಲಕ ನಾಡಿನ ಬೆನ್ನೆಲುಬನ್ನು ಗಟ್ಟಿಯಾಗಿಡುವತ್ತ ಸರ್ಕಾರ ಚಿತ್ತವಿಟ್ಟಿದೆ.

Advertisements