Search

Namma Karnataka

Month

May 2016

ಕಳಚಿದ ಕುವೆಂಪು ಪರಂಪರೆ ಕೊಂಡಿ

06bg_bgkpm_DEJA_07_2464503f

ಕನ್ನಡ ಸಾಹಿತ್ಯ ಲೋಕದ ಅಗ್ರಗಣ್ಯರಲ್ಲಿ ಒಬ್ಬರಾಗಿದ್ದ ನಾಡೋಜ ಡಾ.ದೇ.ಜವರೇಗೌಡರು ಇನ್ನಿಲ್ಲ! ಹೌದು, ಕುವೆಂಪು ಶಿಷ್ಯ ಪರಂಪರೆಯ ಕೊಂಡಿ ಎಂದೇ ಹೇಳಬಹುದಾದ ದೇಜಗೌ 30-05-16 (ಸೋಮವಾರ) ಸಂಜೆ ಇಹಲೋಕ ತ್ಯಜಿಸಿದ್ದಾರೆ. ಆ ಮೂಲಕ ಕನ್ನಡದ ಸಾಹಿತ್ಯಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಸಾಹಿತ್ಯ ಕೃಷಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

   1918ರ ಜುಲೈ 8ರಂದು ಚನ್ನಪಟ್ಟಣದ ಚಕ್ಕರೆಯಲ್ಲಿ ದೇವೇಗೌಡ- ಚನ್ನಮ್ಮ ದಂಪತಿಗೆ ಜನಿಸಿದ ದೇಜಗೌ ಬಡತನದ ನಡುವೆಯೇ ವಿದ್ಯಾಭ್ಯಾಸ ನಡೆಸಿದರು. ರಾಷ್ಟ್ರಕವಿ ಕುವೆಂಪು ಅವರಿಂದ ಪ್ರಭಾವಿತರಾಗಿದ್ದ ಅವರು, ಮೈಸೂರಿನಲ್ಲಿ ಕನ್ನಡ ಎಂಎ ಪದವಿ ಪಡೆದರು. ವಿದ್ಯಾಭ್ಯಾಸದ ನಂತರ ಅನೇಕ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿದರು. 1969ರಲ್ಲಿ ಮೈಸೂರು ವಿವಿ ಕುಲಪತಿಯಾಗಿ ಕನ್ನಡಾಂಬೆಗೆ ಅವಿಸ್ಮರಣೀಯ ಸೇವೆ ಸಲ್ಲಿಸಿದರು.

   ಕನ್ನಡದ ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ದೇಜಗೌ ಅಚ್ಚಳಿಯದ ಕೃತಿಯನ್ನುಳಿಸಿ ಹೋಗಿದ್ದಾರೆ. ಜಾನಪದ, ಗ್ರಂಥ ಸಂಪಾದನೆ, ಸಾಹಿತ್ಯ ವಿಮರ್ಶೆ, ಭಾಷಾಂತರ, ಜೀವನಚರಿತ್ರೆ, ಪ್ರವಾಸ ಸಾಹಿತ್ಯ ಸೇರಿದಂತೆ ಅವರ ಸಾಹಿತ್ಯ ಕೃಷಿ ವ್ಯಾಪಕ ವಿಸ್ತಾರ ಹೊಂದಿದೆ. ನಯನಸೇನನ ಧರ್ಮಾಮೃತ ಸಂಗ್ರಹ, ಲಕ್ಷ್ಮೀಶನ ಜೈಮಿನಿ ಭಾರತ, ಕನಕದಾಸರ ನಳಚರಿತ್ರೆ, ಜಾನಪದ ಅಧ್ಯಯನ, ಜಾನಪದ ಸೌಂದರ್ಯ, ಹಮ್ಮು ಮತ್ತು ಬಿಮ್ಮು, ನೆನಪು ಕಹಿಯಲ್ಲ, ಅನಾ ಕರೆನಿನಾ ಮೊದಲಾದವು ಅವರ ಬರವಣಿಗೆಯ ಕೆಲ ಉದಾಹರಣೆಗಳಷ್ಟೆ.

   ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಹೀಗೇ ಸಾಗುತ್ತದೆ ದೇಜಗೌ ಅವರಿಗೆ ಸಂದ ಪ್ರಶಸ್ತಿ-ಪುರಸ್ಕಾರಗಳ ಪಟ್ಟಿ. 1970ರಲ್ಲಿ ಬೆಂಗಳೂರಿನಲ್ಲಿ ನಡೆದ 47ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 2008ರ ಕರ್ನಾಟಕ ರತ್ನ ಪ್ರಶಸ್ತಿಯು ದೆಜಗೌ ಅವರಿಗೆ ಒಲಿದು ಬಂದಿದೆ.

   ನಿರೀಶ್ವರವಾದಿಯಾಗಿದ್ದು, ಹೊಗಳಿಕೆಗೆ ಉಬ್ಬದೇ, ತೆಗಳಿಕೆಗೆ ಕುಗ್ಗದೇ ತಮ್ಮ ವಿಚಾರಧಾರೆಗಳನ್ನು ಸ್ಪಷ್ಟವಾಗಿ ದಾಖಲಿಸಿದವರು ದೇ.ಜವರೇಗೌಡರು. ಕುವೆಂಪುರವರನ್ನು ತಮ್ಮ ಗುರುವೆಂದು ಸ್ವೀಕರಿಸಿದ್ದ ಅವರ ಹಾಗೂ ಕುವೆಂಪುರವರ ಬಾಂಧವ್ಯ ವಿವರಣಾತೀತವಾದದ್ದು. ಏಕೆಂದರೆ ಕುವೆಂಪುರವರೇ ಒಂದು ಕಡೆ ‘ದೇಜಗೌ ತಮ್ಮ ಜೀವನದ ಮಾರ್ಗದರ್ಶಕರು’ ಎಂದು ಬರೆದುಕೊಂಡಿದ್ದಾರೆ. ಇದು ಕುವೆಂಪು ಅವರಿಗೆ ತಮ್ಮ ಶಿಷ್ಯನೆಡೆಗಿದ್ದ ಅಭಿಮಾನವನ್ನು ತೋರಿಸುತ್ತದೆ. ಇಂತಹ ಮೇರು ವ್ಯಕ್ತಿತ್ವದ ದೇಜಗೌ ಇನ್ನು ನೆನಪು ಮಾತ್ರ. ಅವರ ಭೌತಿಕ ಅಸ್ಥಿತ್ವ ಇನ್ನಿಲ್ಲದಿದ್ದರೂ ಅವರ ಕೃತಿಗಳು ಎಂದಿಗೂ ಅಜರಾಮರ.

Advertisements

Operation Revival!

Jakkur_lakeKarnataka government plans to desilt the state’s 36,500 water bodies as part of the Kere Sanjeevani programme. The state will try to revive and desilt water bodies below 20 acres before June 15, when the monsoon is expected to set in. The government plans to take up desilting work in two tanks in every small taluk (with less than 30 gram panchayats) and three in every large taluk (with over 30 GPs). This apart, 320 temple tanks and 600 kalyanis and ponds will also be taken up for desilting in 137 drought-hit taluks.

Of the 36,500 water bodies in the state, the government has identified around 22,000 minor irrigation tanks in the 137 drought-hit taluks for desilting. With 98% of the water bodies dried and heavily silted, most multi-village and piped water supply schemes have been of little help. According to some estimates, around 30 tmcft of water has been lost due lack of rain, evaporation and heavy silting.

Two earth excavators (JCBs) will be assigned for each tank, supported by 810 dumpers or similar earth-moving vehicles. The government intends to excavate and transport the silt to agriculture fields or some other suitable dumping ground till it starts raining.

It looks like the government is all set to welcome the rains in the state and has taken advanced measures to deal with the upcoming monsoons.

ನೀವು ‘ತಿಥಿ’ಗೆ ಹೋಗಿದ್ರಾ?

thithi_still2

ಸಿನಿಮಾವೊಂದು ನಿಮ್ಮ ನಡುವಿನ ಪಾತ್ರವಾಗಿ, ನಿಮ್ಮೊಡನೆಯೇ ಮಾತನಾಡಿ, ನಿಮ್ಮ ಸುತ್ತಲೇ ನಡೆದರೆ ಹೇಗಿರಬಹುದು? ಕಲ್ಪನೆ ಮಾಡಲು ಕಷ್ಟವಾಗುವುದಾದರೆ ನೀವೊಮ್ಮೆ ತಿಥಿ ನೋಡಬೇಕು! ತಿಥಿ ಚಿತ್ರ ನಿಮ್ಮ ಸಿನಿಮಾ ಬಗೆಗಿನ ದೃಷ್ಟಿಕೋನವನ್ನೇ ಬದಲಾಯಿಸಬಹುದು ಎಂದರೂ ತಪ್ಪಾಗಲಾರದು. ಯಾಕೆಂದರೆ ಅಂತಹ ಒಂದು ವಿಶಿಷ್ಟ ಗುಣವನ್ನಿಟ್ಟುಕೊಂಡೇ ಈ ಚಲನಚಿತ್ರ ಅಂತಾರಾಷ್ಟ್ರೀಯ ಪ್ರವಾಸ ಮುಗಿಸಿ ಇದೀಗ ತವರಿಗೆ ಮರಳಿದೆ ಹಾಗೂ ಕನ್ನಡಿಗರಿಗೆ ಹೊಸ ಅನುಭೂತಿ ನೀಡುತ್ತಿದೆ!

   ಕಲಾತ್ಮಕ ಅಥವಾ ವ್ಯಾಪಾರೀ ಸಿನಿಮಾ ಹೀಗೆ ಯಾವುದೇ ನಿರ್ದಿಷ್ಟ ಹಿಡಿತಕ್ಕೆ ಸಿಗದೆ ತಿಥಿ ನೋಡಿಸಿಕೊಂಡು ಹೋಗುತ್ತದೆ. ಪ್ರಮುಖ ಹಾಗೂ ಕುತೂಹಲಕಾರಿಯಾದ ಅಂಶವೆಂದರೆ ಇಲ್ಲಿರುವ ಕಲಾವಿದರಾರೂ ನಟನಾ ಪಾರಂಗತರಲ್ಲ, ಬಹುಶಃ ಇದೇ ಕಾರಣಕ್ಕಾಗಿ ಅವರೆಲ್ಲ ನಮ್ಮ ನಡುವಿನ ಪಾತ್ರವಾಗುತ್ತಾ ಸಾಗುತ್ತಾರೆ. ಸೆಂಚೂರಿ ಬಾರಿಸಿದ (ವಯಸ್ಸಿನಲ್ಲಿ) ಸೆಂಚೂರಿ ಗೌಡ ಇಹಲೋಕ ತ್ಯಜಿಸುತ್ತಾನೆ. ಆತ ಅತ್ತ ಪಯಣಿಸುತ್ತಿದ್ದರೆ ಗೌಡನ ಸಾವಿಗೆ ಮಗ, ಮೊಮ್ಮಗ, ಮರಿಮಗ ಯಾವ ರೀತಿ ಸ್ಪಂದಿಸುತ್ತಾರೆ ಎನ್ನುವುದೇ ಇಲ್ಲಿ ದೃಶ್ಯರೂಪಕದಲ್ಲಿ ಮೂಡುತ್ತದೆ. ಇದು ಮೂರು ತಲೆಮಾರುಗಳ ಮನಃಸ್ಥಿತಿಯನ್ನು ಯಥಾವತ್ತಾಗಿ ನಿರೂಪಿಸುತ್ತದೆ.

   ನೈಜತೆಯ ಹೆಸರಿನಲ್ಲಿ ಉಸಿರುಗಟ್ಟಿಸುವ ನಿರ್ದೇಶಕರಿಗೆ ನೈಜತೆಯ ವ್ಯಾಖ್ಯಾನ ನೀಡುತ್ತದೆ ತಿಥಿ. ನಿರ್ದೇಶಕ ರಾಮ್‍ರೆಡ್ಡಿಯವರು ನಿಜಕ್ಕೂ ಅಭಿನಂದನಾರ್ಹರು. ಛಾಯಾಗ್ರಾಹಕ ಡೊರೋನ್ ಟೆಂಪರ್ಟ್ ಹಳ್ಳಿಯ ಸೊಗಡನ್ನು ಹಾಗೇ ಎದುರಿಗೆ ತಂದಿಟ್ಟಿದ್ದಾರೆ. ಇನ್ನು ಕಲಾವಿದರಾದ ಚನ್ನೇಗೌಡ, ತಮ್ಮೇಗೌಡ, ಅಭಿಷೇಕ್, ಸಿಂಗ್ರಿಗೌಡ, ಪೂಜಾ ಮೊದಲಾದವರು ನೆನಪಿನಲ್ಲಿ ಉಳಿಯುತ್ತಾರೆ.

   ಈರೇಗೌಡರ ನವಿರಾದ ಹಾಸ್ಯದ ಚಿತ್ರಕಥೆ ಕನ್ನಡಿಗರಿಗೆ ಕಚಗುಳಿಯಿಟ್ಟಿದೆ. ಸಿನಿಮಾವೊಂದು ಹೀಗೂ ಇರುತ್ತದೆ, ಹೀಗಿದ್ದರೆ ಚೆನ್ನ ಎನ್ನುವಂತೆ ಮಾಡಿದ ‘ತಿಥಿ’ ಚಿತ್ರತಂಡಕ್ಕೆ ಅಭಿನಂದನೆ. ಒಮ್ಮೆ ನೋಡಿ ತಿಥಿ.

ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣ

Untitled-1

ಕೊಲುವವನೇ ಮಾದಿಗ

ಹೊಲಸ ತಿಂಬವನೇ ಹೊಲೆಯ

ಕುಲವೇನೋ? ಆವದಿರ ಕುಲವೇನೋ?

ಸಕಲ ಜೀವಾತ್ಮರಿಗೆ ಲೇಸನೇ ಬಯಸುವ

ನಮ್ಮ ಕೂಡಲಸಂಗನ ಶರಣರೇ ಕುಲಜರು!

ದಾರಿತಪ್ಪಿದ ಸಮಾಜವನ್ನು ಸರಿಯಾದ ದಿಕ್ಕಿಗೆ ತಿರುಗಿಸಿದವರು ಬಸವಣ್ಣ. ಅಂಧಾಚರಣೆ, ಮೂಢನಂಬಿಕೆ, ಜಾತೀಯತೆ ಮೊದಲಾದ ಅನಿಷ್ಟಗಳನ್ನು ಧಿಕ್ಕರಿಸಿ, ಸತ್ಯದ ಒಳಗಣ್ಣನ್ನು ತೆರೆಯಲು ಪ್ರೇರೇಪಿಸಿದವರು ಬಸವಣ್ಣ. ಮಾನವ ಸಂಘರ್ಷಗಳಿಗೆ ತಮ್ಮ ವಚನಗಳ ಮೂಲಕ ಉತ್ತರ ನೀಡಿ ಕ್ಲಿಷ್ಟ ಸಂಗತಿಗಳನ್ನೂ ಅತಿಸರಳವಾಗಿ ತಿಳಿಸಿ ಹೇಳಿದವರು ಬಸವಣ್ಣ.

   12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಕ್ರಾಂತಿಕಾರಕವಾದ ಸಾಮಾಜಿಕ ಮತ್ತು ಧಾರ್ಮಿಕ ಬದಲಾವಣೆಗಳಾದವು. ಮೌಢ್ಯಗಳ ತುಳಿದು, ವಿವೇಚನೆಯ ಹಾದಿಯನ್ನು ತೋರಿಸಿಕೊಟ್ಟ ಮಹಾತ್ಮ ಬಸವಣ್ಣ ಆ ಸಮಯದಲ್ಲಿ ಆಗಿಹೋದ ಮಹಾಪುರುಷರಲ್ಲಿ ಒಬ್ಬರು. ಬಾಲ್ಯದಲ್ಲೇ ಕ್ರಾಂತಿಕಾರಿ ವಿಚಾರಧಾರೆ ಹೊಂದಿದ್ದವರು ಅವರು. ಸ್ತ್ರೀ ಕುಲದ ಮೇಲಿನ ದೌರ್ಜನ್ಯವನ್ನು ಬಾಲಕ ಬಸವಣ್ಣ ಖಂಡಿಸಿದ ಸಂದರ್ಭವೇ ಅದನ್ನು ಸಾಬೀತುಪಡಿಸುತ್ತದೆ. ತಂದೆ-ತಾಯಿ ಮಗನಿಗೆ ಉಪನಯನ ಮಾಡಿಸಲು ಮುಂದಾದಾಗ ಅಕ್ಕನಿಗೇಕಿಲ್ಲ ಉಪನಯನ ಎಂದು ಬಸವಣ್ಣ ಪ್ರಶ್ನಿಸುತ್ತಾರೆ. ಇದು ಬಾಲಕ ಬಸವಣ್ಣನಲ್ಲಿದ್ದ ಕ್ರಾಂತಿಯ ಕಿಡಿಯನ್ನು ಪರಿಚಯಿಸುತ್ತದೆ.

   ಬಸವಣ್ಣನವರಿಗೆ ಅಪಾರ ಜೀವನಾನುಭವ ನೀಡಿದ್ದು ‘ಅನುಭವ ಮಂಟಪ’. ಅಲ್ಲಿ ಅವರ ವಿಚಾರಧಾರೆಗಳಿಗೆ ಸ್ಪಷ್ಟ ರೂಪ ದೊರೆಯಿತು. ಶರಣರ ಸಂಗ ಅವರ ಜೀವನೋದ್ದೇಶವನ್ನು ಖಚಿತಪಡಿಸಿತು. ಮಾನವತೆ, ದಯೆ, ಜಾತ್ಯಾತೀತತೆ, ಸ್ತ್ರೀ ಸಮಾನತೆ ಹೀಗೆ ಬಸವಣ್ಣ ಸಮಾಜದ ಎಲ್ಲ ಸ್ತರಗಳಲ್ಲಿರುವ ಮೌಢ್ಯವನ್ನು ಖಂಡಿಸಿದ್ದಾರೆ, ಅದಕ್ಕಾಗಿ ಉಚಿತ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ. ಧರ್ಮದ ಹೆಸರಿನಲ್ಲಿ ಜನರು ಕೆಸರಿನಲ್ಲಿ ಹೊರಳಾಡುವ ವೇಳೆ ಧರ್ಮಕ್ಕೆ ವೈಚಾರಿಕ ದೃಷ್ಟಿಕೋನ ನೀಡಿ ಸನ್ಮಾರ್ಗ ತೋರಿದವರು ಅವರು. ಬಸವಣ್ಣ ಕ್ರಾಂತಿಕಾರಿ ಚಿಂತನೆಯ ಮೂರ್ತರೂಪರಾಗಿದ್ದರು.

   ವಚನ ಸಾಹಿತ್ಯದ ಮೂಲಕ ಜನಸಾಮಾನ್ಯರನ್ನು ಶ್ರೇಷ್ಠ ಚಿಂತನೆಯೆಡೆಗೆ ಮುಖಮಾಡುವಂತೆ ಮಾಡಿದ ದಾರ್ಶನಿಕರವರು. ಬಸವಣ್ಣನವರ ಚಿಂತನೆಗಳು, ಆದರ್ಶ ಇವತ್ತಿಗೂ ಸಮಾಜಕ್ಕೆ ದಾರಿದೀಪವಾಗಿದೆ.

THITHI FOR OSCARS?

b037fbf4-8eb4-41e9-9de8-79bb52318fcdThithi could become the first kannada movie to get an official entry to Oscars. The Kannada film Thithi, made by young Bengaluru filmmakers Raam Reddy and Ere Gowda, will have an Oscar-qualifying theatrical release in the US, to be considered for the Oscars.

Many have attempted to showcase the authentic village life, but have ended up either stereotyping or overdoing it. Siddalingaiah’s attempt to showcase the village life is probably one of the most authentic and believable. It seem like the village has literally come to life, on the screen. Thithi has a bit of a documentary effect, in its portrayal of the real life of the old-life Mysuru with great character detailing and intensity.

The story of the film revolves around the death of 'Century' Gowda, a man who has lived a hundred years and the eleven days leading up to his death. What makes the film stand out, is that there are no professional actors in the cast, except for two.

ALL YOU NEED TO KNOW ABOUT THE KARNATAKA MEDICAL ENTRANCE EXAM

15_KIEP_ENTRANCE_503369f

Thousands of medical entrance aspirants, who geared up for the National Eligibility Entrance Test (NEET), are now waiting for their results. The Karnataka government has been pushing for giving students more time to prepare themselves for the common exam. Till the time it seeks legal opinion on how to make the process of transition from a regional to a common entrance simpler for the students, the government advised the students to appear for both NEET and the Common Entrance Test, conducted by it.

The apex court in its decision had approved the schedule put before it by the Centre, CBSE and the Medical Council of India (MCI) for treating All India Pre-Medical Test (AIPMT) fixed for May 1 as NEET-1 and holding NEET-II on July 24 for those who have not applied for AIPMT.

The combined result would be declared on August 17 so that the admission process can be completed by September 30. For more information on the official answer and results, please visit the official KEA website http://kea.kar.nic.in/cet_2016.html.

Blog at WordPress.com.

Up ↑