ugadi1
ಯುಗಾದಿ! ಎಲ್ಲೆಡೆ ಹೊಸವರ್ಷದ ಸಂಭ್ರಮ. ಮನೆ-ಮನಗಳಲ್ಲಿ ಹೊಸ ಕನಸಿನೆಡೆಗೊಂದು ಪಯಣ. ಭಾರತೀಯ ಸಂಸ್ಕøತಿಯ ಒಂದು ಭಾಗವಾದ ಹಬ್ಬಗಳು ಅದೆಷ್ಟು ಚಂದ! ಪ್ರತಿಯೊಂದು ಹಬ್ಬವೂ ಹೊಸತನದಿಂದ-ವಿಶೇಷತೆಯಿಂದ ಕೂಡಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅದ್ಭುತವಾದ ಸಂದೇಶ ಹಬ್ಬಗಳಲ್ಲಿ ಅಡಕವಾಗಿರುತ್ತದೆ. ಅದೇ ರೀತಿ ಯುಗಾದಿಯೂ ಇಡೀ ಜೀವನದ ಸಾರವನ್ನು ಅತ್ಯಂತ ಸರಳವಾಗಿ ತಿಳಿಹೇಳುತ್ತದೆ. ಯುಗ-ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ..
   ಬೇವು-ಬೆಲ್ಲವನ್ನು ಹಂಚಿ ಸಡಗರದಿಂದ ಆಚರಿಸುವ ಯುಗದ ಆದಿಯ ಹಬ್ಬವಿದು. ಹೊಸವರ್ಷಕ್ಕೆ ಕಾಲಿಡುವ ವೇಳೆಯಲ್ಲಿ ‘ಜೀವನದಲ್ಲಿ ನೋವು-ನಲಿವುಗಳು ಸಮಪ್ರಮಾಣದಲ್ಲಿರಲಿ’ ಎನ್ನುವ ಸಂದೇಶವನ್ನು ಬೇವು-ಬೆಲ್ಲ ನೀಡುತ್ತದೆ. ಎಷ್ಟು ಅರ್ಥಪೂರ್ಣ ಅಲ್ಲವೆ? ಬದುಕಿನುದ್ದಕ್ಕೂ ಕೇವಲ ನಲಿವನ್ನೇ ಅನುಭವಿಸಿದರೆ ನಲಿವಿನ ರುಚಿಯೇ ತಿಳಿಯದು. ಯಾವಾಗ ನೋವೂ ನಮ್ಮನ್ನು ಕಾಡುವುದೋ ಆಗ ಮಾತ್ರ ನಲಿವಿನ ಮಹತ್ವ ಅರ್ಥವಾಗುತ್ತದೆ. ಕೆಲವೊಮ್ಮೆ ನೋವು ಸಹ ಹೊಸತೊಂದು ಸಾಧನೆಗೆ ಕಾರಣವಾಗಬಹುದು, ಅಗಾಧವಾದ ಅನುಭವಕ್ಕೆ ತೆರೆದುಕೊಳ್ಳುವಂತೆ ಮಾಡಬಹುದು.
   ಇದೀಗ ನಾವು ದುರ್ಮುಖಿ ನಾಮ ಸಂವತ್ಸರಕ್ಕೆ ಕಾಲಿಟ್ಟಿದ್ದೇವೆ. ಈ ವರ್ಷ ಎಲ್ಲರ ಮೊಗದಲ್ಲಿ ನಗು ತರಲಿ. ನಲಿವಿನಲ್ಲಿ ಹಿಗ್ಗದೆ, ನೋವಿನಲ್ಲಿ ಕುಗ್ಗದೆ ಎಲ್ಲವನ್ನೂ ಸಮಚಿತ್ತದಿಂದ ಎದುರುಗೊಳ್ಳುವ ಶಕ್ತಿ ಎಲ್ಲರದಾಗಲಿ. ಈ ಯುಗಾದಿ ಹೊಸತೊಂದು ನಡೆಗೆ ಸಾಕ್ಷಿಯಾಗಲಿ. ಮೈಮನಗಳು ಉಲ್ಲಸಿತವಾಗಿರಲಿ.
                                          ಲೋಕಾ ಸಮಸ್ತಾ ಸುಖೀನೋ ಭವಂತು
Advertisements